ಗೌರವಾನ್ವಿತ ಮುಖ್ಯಮಂತ್ರಿಯವರಿಂದ ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ಪ್ರಶಂಸಾ ಪತ್ರ:ದಿನಾಂಕ: 02-10-2016 ಗಾಂಧೀ ಜಯಂತಿ ದಿನದಂದು ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 2016-17 ರಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯದ ಯಶಸ್ವಿ ಕಾರ್ಯನಿರ್ವಹಣೆಗಾಗಿ ಗೌರವಾನ್ವಿತ ಮುಖ್ಯಮಂತ್ರಿಯವರಿಂದ ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ಪ್ರಶಂಸೆ ಪತ್ರ ಲಭಿಸಿದೆ.
ಮುಖ್ಯಮಂತ್ರಿ ಪ್ರಶಸ್ತಿ: ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ 2013 ರಲ್ಲಿ “ಮುಖ್ಯಮಂತ್ರಿ ರತ್ನ” ಪ್ರಶಸ್ತಿ ದೊರಕಿದೆ.
ಭೂಸಿರಿ ತಂತ್ರಾಂಶಕ್ಕೆ ರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರ: 2015-16 ನೇ ಸಾಲಿನಲ್ಲಿ ಹೈದರಾಬಾದ್ ನಲ್ಲಿ ನಡೆದ ವಿವಿಧ ಇಲಾಖೆ/ಸಾರ್ವಜನಿಕ ಉದ್ದಿಮೆಗಳಲ್ಲಿ ತಂತ್ರಾಂಶ ಅನುಷ್ಠಾನದ ಸ್ಪರ್ಧಾತ್ಮಕದಲ್ಲಿ ಸಂಸ್ಥೆಯ ಭೂಸಿರಿ ತಂತ್ರಾಂಶದ ಅಂತಿಮ ಸುತ್ತಿನ ಪ್ರದರ್ಶನಕ್ಕೆ ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ರಾಷ್ಟ್ರೀಯ ಮಟ್ಟದ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ (CSI)-ನಿಹಿಲೆಂಟ್ ಪ್ರಮಾಣ ಪತ್ರ ಲಭಿಸಿದೆ.
ಕೂಡಲಸಂಗಮ ಕಾಮಗಾರಿಗೆ ಪ್ರಶಸ್ತಿ ಪ್ರಮಾಣಪತ್ರ: 2005 ರಲ್ಲಿ ಬಾಗಲಕೋಟೆಯ ಜಿಲ್ಲೆಯ ಕೂಡಲಸಂಗಮದಲ್ಲಿ ದಾಸೋಹ ಭವನ ನಿರ್ಮಾಣದ ಉತ್ತಮ ಕೆಲಸ ನಿರ್ವಹಣೆಗಾಗಿ ಪ್ರಶಂಸೆ ಪ್ರಮಾಣ ಪತ್ರ ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ನೀಡಲಾಗಿದೆ.
ಎ ಸಿ ಸಿ ಇ ಸರ್ವ ಮಂಗಳ ಪ್ರಶಸ್ತಿ: 2002 ರಲ್ಲಿ ಗುಲ್ಬರ್ಗಾ ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರ ನಿರ್ಮಿಸುವಲ್ಲಿ ಕೆ.ಆರ್.ಐ.ಡಿ.ಎಲ್ ಸಂಸ್ಥೆ ಗೆ ಎ ಸಿ ಸಿ ಇ ಸರ್ವ ಮಂಗಳ ಪ್ರಶಸ್ತಿ ದೊರಕಿದೆ.
ಎ ಸಿ ಸಿ ಇ ಸರ್ವ ಮಂಗಳ ಪ್ರಶಸ್ತಿ: ಕರ್ನಾಟಕದ ಬಿಜಾಪುರ, ಬಾಗಲಕೋಟೆ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳ 149 ಹಳ್ಳಿಗಳಿಗೆ ರೂ.36 ಕೋಟಿ ವೆಚ್ಚದಲ್ಲಿ ಕೇವಲ 12 ತಿಂಗಳಲ್ಲಿ ನೀರು ಸರಬರಾಜು ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್ ಸಂಸ್ಥೆಯು ಅತ್ಯುತ್ತಮವಾಗಿ ಪೂರೈಸಿದ್ದರಿಂದ 2001 ರಲ್ಲಿ ಎ ಸಿ ಸಿ ಇ ಸರ್ವಮಂಗಳ ಪ್ರಶಸ್ತಿ ದೊರಕಿದೆ.
ಫೋಟೋ ಗ್ಯಾಲರಿ | |
ವ್ಯವಸ್ಥಾಪಕ ನಿರ್ದೇಶಕರಿಂದ ಸಭೆ ಮತ್ತು ಪರಿವೀಕ್ಷಣೆ | ಅಧ್ಯಕ್ಷರಿಂದ ಸಭೆ ಮತ್ತು ಪರಿವೀಕ್ಷಣೆ |
ಕಂಪ್ಯೂಟರ್ ತರಬೇತಿ | ಮುಂದಿನ ಯೋಜನೆಗಳು |
ಪೂರ್ಣಗೊಂಡ ಯೋಜನೆಗಳು | ಹಿಂದಿನ ಪರಿಶೀಲನೆಯ ಫೋಟೋಗಳು |
ಕೆ.ಆರ್.ಐ.ಡಿ.ಎಲ್ ನ ಹೆಮ್ಮೆಯ ಕ್ಷಣಗಳು |
ಕೆ.ಆರ.ಐ.ಡಿ.ಎಲ್ ಗ್ರಾಮೀಣಾಭಿವೃದ್ಧಿ ಭವನ 4ನೇ ಮತ್ತು 5ನೇ ಮಹಡಿ, ಆನಂದ್ ರಾವ್ ವೃತ್ತ, ಬೆಂಗಳೂರು-560009. |