ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.), ಸಂಸ್ಥೆಯು ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆ.ಆರ್.ಐ.ಡಿ.ಎಲ್. ಸಂಸ್ಥೆಯು 1971 ರಲ್ಲಿ ಕರ್ನಾಟಕ ಭೂಸೇನಾ ನಿರ್ದೇಶನಾಲಯವಾಗಿ ಅಸ್ತಿತ್ವಕ್ಕೆ ಬಂದಿದ್ದು, 1974ರ ಆಗಸ್ಟ್ 09 ರಿಂದ ಕರ್ನಾಟಕ ಭೂಸೇನಾ ನಿಗಮವಾಗಿ ಕರ್ನಾಟಕ ಸರ್ಕಾರದ ಅಧೀನಕ್ಕೆ ಒಳಪಟ್ಟ ಸಂಸ್ಥೆಯಾಗಿರುತ್ತದೆ. ದಿನಾಂಕ 6 ನೇ ಆಗಸ್ಟ್ 2009 ರಿಂದ ಜಾರಿಗೆ ಬರುವಂತೆ ಕರ್ನಾಟಕ ಭೂಸೇನಾ ನಿಗಮ ನಿಯಮಿತದಿಂದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಎಂದು ಹೆಸರನ್ನು ಬದಲಿಸಲಾಗಿದೆ.
ಸಿವಿಲ್ ಕಾಮಗಾರಿಗಳ ನಿರ್ವಹಣೆಯಿಂದ ಸರ್ಕಾರದ ಆಸ್ತಿಯನ್ನು ಸೃಷ್ಟಿಸುವ ವಿಶಿಷ್ಟ ಸಂಸ್ಥೆಯಾಗಿರುತ್ತದೆ.
ಕೇಂದ್ರ ಕಛೇರಿಯು ಬೆಂಗಳೂರಿನಲ್ಲಿದ್ದು, ವಲಯ, ವಿಭಾಗ ಮತ್ತು ಉಪ ವಿಭಾಗ ಕಛೇರಿಗಳನ್ನು ಹೊಂದಿ ರಾಜ್ಯಾದ್ಯಂತ ತನ್ನ ಕಾರ್ಯಾಜಾಲವನ್ನು ವಿಸ್ತರಿಸಿಕೊಂಡಿರುತ್ತದೆ.
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಪ್ರಮುಖ ಉದ್ದೇಶ ಕಾಮಗಾರಿಗಳನ್ನು ನಿರ್ವಹಿಸುವ ಮೂಲಕ ಸ್ಥಳೀಯ ನಿರುದ್ಯೋಗಿ, ಅರೆ ನಿರುದ್ಯೋಗಿಗಳಿಗೆ ಕೆಲಸವನ್ನು ಒದಗಿಸುವ ಮೂಲಕ ಗ್ರಾಮೀಣ ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸುವುದು.
ಗ್ರಾಮೀಣಾಭಿವೃದ್ಧಿ ಕಾಮಗಾರಿಗಳನ್ನು ಸಂಸ್ಥೆಯು ನೇರವಾಗಿಯೇ ನಿರ್ವಹಿಸುವುದರಿಂದ, ಮಧ್ಯವರ್ತಿಗಳು ಹಾಗೂ ಗುತ್ತಿಗೆದಾರರನ್ನು ದೂರವಿಟ್ಟು, ಯೋಜನೆಗಳಿಗೆಂದು ಮೀಸಲಿಟ್ಟ ಹಣದ ಪೂರ್ಣ ಫಲವನ್ನು ಗ್ರಾಮೀಣ ಜನರಿಗೆ ತಲುಪಿಸುವುದು.
ಕೆ.ಆರ್.ಐ.ಡಿ.ಎಲ್ ಸಂಸ್ಥೆಯು ಕರ್ನಾಟಕ ರಾಜ್ಯಾದ್ಯಂತ ಮತ್ತು ಹೊರ ರಾಜ್ಯಗಳಲ್ಲೂ ತನ್ನ ಕಾರ್ಯಾಜಾಲವನ್ನು ಹರಡಿರುತ್ತದೆ. ಸಂಸ್ಥೆಯಲ್ಲಿ ಒಟ್ಟು 848 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ 315 ನುರಿತ, ಪರಿಣಿತ ಹಾಗೂ ಅನುಭವಿ ತಾಂತ್ರಿಕ ಸಿಬ್ಬಂದಿ 533 ಲಿಪಿಕ ಸಿಬ್ಬಂದಿಗಳು ರಾಜ್ಯಾದ್ಯಂತ ಯಾವುದೇ ಕಾಮಗಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದುವ ಮೂಲಕ ಸಂಸ್ಥೆಯ ಯಶಸ್ಸಿಗೆ ಕಾರಣಿಕರ್ತರಾಗಿರುತ್ತಾರೆ.
ಕೆ.ಆರ್.ಐ.ಡಿ.ಎಲ್ ಸಂಸ್ಥೆಯು ರಾಜ್ಯಾದಾದ್ಯಂತ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಗ್ರಾಮೀಣ ಸಂಪರ್ಕ, ಸೇತುವೆಗಳು, ಶಾಲೆಗಳು, ಆಸ್ಪತ್ರೆಗಳು, ಹಾಸ್ಟೆಲ್ ಗಳು, ಮನೆಗಳು ಗ್ರಾಹಕರ ವೇದಿಕೆ, ಯುವ ಸೇವೆಗಳು, ನವೋದಯ ವಿದ್ಯಾಲಯ ಸಂಘಟನೆಗಳು, (ಎನ್.ವಿ.ಎಸ್) ಕೇಂದ್ರೀಯ ವಿದ್ಯಾಲಯ ಸಂಘಟನೆಗಳು (ಕೆ.ವಿ.ಎಸ್.) ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳನ್ನು ಕೊಡುವ ನಿಟ್ಟಿನಲ್ಲಿ ಜಲಸಂವರ್ಧನಾ ಕಾಮಗಾರಿಗಳು, ಪಶು ಸಂಗೋಪನೆ, ಮೀನುಗಾರಿಕೆ, ಸಣ್ಣ ನೀರಾವರಿ, ಗ್ರಾಮೀಣ ಸಂಪರ್ಕ, ಸಲಹಾ ಕೇಂದ್ರಗಳು ಮುಂತಾದ ಕಾಮಗಾರಿಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವುದು.
ಫೋಟೋ ಗ್ಯಾಲರಿ | |
ವ್ಯವಸ್ಥಾಪಕ ನಿರ್ದೇಶಕರಿಂದ ಸಭೆ ಮತ್ತು ಪರಿವೀಕ್ಷಣೆ | ಅಧ್ಯಕ್ಷರಿಂದ ಸಭೆ ಮತ್ತು ಪರಿವೀಕ್ಷಣೆ |
ಕಂಪ್ಯೂಟರ್ ತರಬೇತಿ | ಮುಂದಿನ ಯೋಜನೆಗಳು |
ಪೂರ್ಣಗೊಂಡ ಯೋಜನೆಗಳು | ಹಿಂದಿನ ಪರಿಶೀಲನೆಯ ಫೋಟೋಗಳು |
ಕೆ.ಆರ್.ಐ.ಡಿ.ಎಲ್ ನ ಹೆಮ್ಮೆಯ ಕ್ಷಣಗಳು |
ಕೆ.ಆರ.ಐ.ಡಿ.ಎಲ್ ಗ್ರಾಮೀಣಾಭಿವೃದ್ಧಿ ಭವನ 4ನೇ ಮತ್ತು 5ನೇ ಮಹಡಿ, ಆನಂದ್ ರಾವ್ ವೃತ್ತ, ಬೆಂಗಳೂರು-560009. |